ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Monday, June 22, 2009

ಎಂಗಳ ಹಳ್ಳಿ ಮಾಣಿ ಫಾರೀನು ಹೋಪದು..

ನಮಸ್ಕಾರ.
ಆನು ನಾಳೆ ಚೀನಾ ದೇಶದ ಮಾನಸ ಸರೋವರ ಕ್ಕೆ ಕಾರ್ಯಕ್ರಮ ನಿಮಿತ್ತ ಹೋಗಿಗೊಂಡಿದ್ದೆ. ಹಾಂಗಾಗಿ ನಿನ್ಗಲೆಲ್ಲ ಶುಭಾಶಯಂಗ ಹಿರಿಯವರ ಆಶೀರ್ವಾದ ಅಗತ್ಯ,ಪುನಃ ಬಪ್ಪದು ಅಂದಾಜು ೨೦ ತಾರೀಖು ಕಳುದು ... ಅಲ್ಲಿಯ ಅನುಭವ ನಿಂಗೋಗೆ ಆನು ಖಂಡಿತಾ ಹೇಳ್ತೆ.ಈ ವರೆಗೆ ನಿಂಗಳ ಮಧ್ಯೆ ಇಪ್ಪಲೇ ಕಷ್ಟ ಅವ್ತಾ ಇದ್ದು.ಇನ್ನು ಬಪ್ಪ ಹೊಸ ಎನ್ನ ಗೆಳೆಯರೂ ಈಗ ಇಪ್ಪ ಗೆಳೆಯರೂ ದಯವಿಟ್ಟು ಎನ್ನ ಮರೆಯಡಿ.ರಜ್ಜ ದಿನ ನಿಂಗಳ ಆನು ಮಿಸ್ ಮಾಡ್ತಾ ಇದ್ದೆ.
ನಿಂಗಳ ಹೊಸ ಬ್ಲಾಗ್ ಕಾಮೆಂಟ್ ಗಳ ಆನು ನಿರೀಕ್ಷೆ ಮಾಡ್ತಾ ಇರ್ತೆ.

ಇತೀ
ಗಣೇಶ ಮಾಡಾವು

Sunday, June 21, 2009

ನನ್ನ ಬಾಲ್ಯ,ನನ್ನ ಬಗ್ಗೆ ಈಗ ಪರಿಚಯ ಇರುವರು ಕಮ್ಮಿ.ನಾನು ಬಾಲ್ಯದಲ್ಲಿ ೭ ನೆ ತರಗತಿವರೆಗೆ ಕೆಯ್ಯೂರು ಶಾಲೆಗೆ ಹೋಗಿದ್ದೆ.ಆ ಅನುಭವಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ. ೧೯೮೭ ಮೇ ೩೧ ರಂದು ನನ್ನ ಅಪ್ಪ ನನ್ನನ್ನು ಶಾಲೆಗೆ ಕರೆದುಕೊಂಡು ಹೋದರು.. ಶಾಲೆ ಎಂದರೆ ಏನೆಂದು ಅರಿಯದ ನನಗೆ ಏಕಾ ಏಕಿ ನನಗೆ ವೆಂಕಪ್ಪ ಮಾಷ್ಟ್ರನ್ನು ಕಂಡಾಗ ಮತ್ತು ಅವರ ದೊಡ್ಡ ಸ್ವರ ಕೇಳಿದಾಗ ಒಂದು ಕ್ಷಣ ನಡುಗಿ ಹೋಗಿದ್ದೆ. ನಿಂಗೆ ೧ ೨ ಬರುತ್ತಾ ಎಂದು ಕೇಳಿದರು."ಬರುತ್ತದೆ" ಎಂದು ಹೇಳಿದೆ ಕೈ ಕಟ್ಟಿಕೊಂಡು.ನನಗೆ ಅಜ್ಜ ಅಷ್ಟರವರೆಗೆ ಮೇಷ ,ವೃಷಭ, ಚೈತ್ರ ,ವೈಶಾಖ,ಅಶ್ವಿನಿ ಭರಣಿ,ಪ್ರಭವ ವಿಭವ ದ ಮಧ್ಯೆ ಇದನ್ನೂ ಹೇಳಿಕೊಡುತ್ತಿದ್ದರು. ಹಾಗಾದ ಕಾರಣ ಸ್ವಲ್ಪ ಧೈರ್ಯ ಮಾಡಿ ಹೇಳಿದೆ,ಅಲ್ಲಿಗೆ ಸಂದರ್ಶನ ಮುಗಿಯಿತು, ಮರುದಿನ ಶಾಲೆ, ನನಗೆ ಮೇಡಂ ಆಗಿ ಬಂದವರು ಲಲಿತ ಮೇಡಂ,ತುಂಬಾ ಮಾತೃ ವಾತ್ಸಲ್ಯ ದ ಮನಸ್ಸು,ನಾನು ಲೆಕ್ಕ ದಲ್ಲಿ ಸ್ವಲ್ಪ ಹಿಂದೆ,ನನ್ನ ಕೈ ಬೆರಳು ಬೋರ್ಡಿಗೆ ಮುಟ್ಟಿಸಿ ಪಾಠ ಮಾಡುತ್ತಿದ್ದರು.ಈ ತರಹದ ಮೇಡಂ ಗಳು ಇನ್ನು ಸಿಗುತ್ತಾರೋ ಇಲ್ವೋ?ಅಂತೂ ನನ್ನ ಭಯ ಎಲ್ಲ ಅಲ್ಲಿಗೆ ಮಾಯ,ದಿನಾ ಅವರ ಒಟ್ಟಿಗೆ ಶಾಲೆಗೆ ಹೋಗುವುದೂ ಬರುವುದೂ.ನಂಗೆ ನಾಯಿ ಕಂಡು ಹೆದರಿಕೆ ಆದರು ಅವರು ನನ್ನನ್ನು ಜಾಗ್ರತೆಯಾಗಿ ಕರೆದು ಕೊಂಡು ಹೋಗುತ್ತಿದ್ದರು.ನನ್ನ ಕೊಡೆ ಒಂದ್ಸಲ ಗಾಳಿಗೆ ತೂತಾದಾಗ ಅವ್ರೆ ನನ್ನನ್ನು ಎತ್ತಿಕೊಂಡು ಬಂದದ್ದು ಈಗಲೂ ಕಣ್ಣಿಗೆ ಕಾಣುತ್ತಿದೆ.ಎರಡನೇ ಕ್ಲಾಸ್ ಗೆ ಜಯಮ್ಮ ಮೇಡಂ,ಮೋರನೆ ಕ್ಲಾಸಸ್ ಗೆ ಸರೋಜಾ ಮೇಡಂ,೪ ನೆಗೆ ಉಗ್ಗಪ್ಪ ಸರ್, ೫ಗೆ ಭಾಸ್ಕರ ಮಾಸ್ತರು.೬ನೆಗೆ.ನಾಗೇಶ್ ಮಾಸ್ತರು. ೭ನೆಗೆ.ಜಗನ್ನಾಥ್ ರೈ.ಹೀಗೆ ಹೇಳಿದರೆ ತುಂಬಾ ಇದೆ.ಈ ಸಮಯದಲ್ಲಿ ನನ್ನ ಪರಿಚಯದವರು ಇದ್ದರೆ ಇಲ್ಲಿ ಈಗ ಸೇರೋಣ ಬನ್ನಿ,ಅದಕ್ಕಾಗಿ ಈ ಪುನರ್ಮಿಲನ.

Saturday, June 20, 2009

ಎಂಗಳ ಒಪ್ಪಣ್ಣ,


ಆನು ಒಪ್ಪಣ್ಣ ಹೇಳಿ,ಈಗ ಸದ್ಯಕ್ಕೆ ಈ ಹೆಸರು ಇಲ್ಲೆ. ಆದರೂ ಎನ್ನ ಹಳೆ ನೆಂಪು ಇಪ್ಪ ಅಜ್ಜನ್ಡ್ರೋ ಮಾವನ್ದ್ರೋ ಅವಕ್ಕೆ ಗೊಂತಿಕ್ಕು,ಮಾಡಾವು ವೆಂಕಟರಮಣ ನ ಮಗನೋ ಹೇಳಿ ಕೇಳುಗು. ಅಥವಾ ಗೆಣವತಿ ಯ ಪುಳ್ಳಿಯೋ ಹೇಳಿ ಸಂಬಂಧ ಕೇಳುಗು . ಆದರೆ ಗೆಣವತಿ ಅಜ್ಜ ಎನ್ನ ಅಪ್ಪನ ಅಪ್ಪ,ಎನ್ನ ಬಾಲ್ಯ ಹೇಳಿದರೆ ೫ ವರ್ಷ ವರೆಗೆ ಆನು ಅಜ್ಜನ ಬೀಲ ಆಗಿತ್ತೆ.ಹಾಂಗಾದ ಕಾರಣ ಕೆಲವು ಅಜ್ಜಿಯಕ್ಕಗಾದರೂ ಎನ್ನ ಗೊಂತಿಕ್ಕು.ಕೆಲವು ಜನ ಅಜ್ಜಿಯಕ್ಕೊ ಈಗಲೂ ಎನ್ನ ಹೇಳ್ಥವು, ನಿನ್ನ ಆನು ಸನ್ನಕಿಪ್ಪಾಗ ಆನು ಎತ್ತಿ ಆಡ್ಸಿದ್ದೆ ...ಹೇಳಿ.. ಈ ಸಮಯಲ್ಲಿ ಎನ್ನ ಅಜ್ಜ ಪ್ರೀತಿಲಿ ಎನ್ನ ಒಪ್ಪಣ್ಣ ಹೇಳಿ ಹೆಸರು ಮಡುಗಿದ್ದವು.ಆ ಅಜ್ಜ ಇಂದು ಇಲ್ಲೆ.ಹಾಂಗಾದ ಕಾರಣ ನಿಂಗೋಗೆ ಆರಿನ್ಗಾದರೂ ಅಜ್ಜನ್ಡ್ರೋ ಅಜ್ಜಿಯಕ್ಕಲೋ ಮತ್ತು ಇದ್ದರೆ ಅವರ ಹತ್ತಾರೆ ಎನ್ನ ಕೇಳಿ.ಅವಕ್ಕೆ ಎನ್ನ ಗೊಂತಿಕ್ಕು.ಆ ಮೂಲಕ ಎನ್ನ ಪರಿಚಯ ಮಾಡಿಗೊಂಡು ನಾವು ಫ್ರೆಂಡ್ಸ್ ಅಪ್ಪ,ಅಥವಾ ಅಜ್ಜಂದ್ರ ಭಾಷೇಲಿ ಹೇಳ್ತಾರೆ ದೋಸ್ತಿ ಅಪ್ಪ ಹೇಳಿ.
ಎನ್ನ ಗೊಂಥಕ್ಕಲ್ದಾ?
ಗಣೇಶ ಮಾಡಾವು

ಹ,
ಮತ್ತೊಂದು ಜಾಗ್ರತೆ.ಎನ್ನ ಅಪ್ಪಿ ತಪ್ಪಿ ಕೂಡಾ ಒಪ್ಪಣ್ಣ ಹೇಳಿ ಹೇಳಡಿ ...ಎನಗೆ ಕೋಪ ಬತ್ತು.
ಎನ್ನ ಅಪ್ಪ ಅಮ್ಮ ಹೇಳುಗು ಹಾಂಗೆ. ನಿಂಗ ಎಲ್ಲಿಯಾದರೂ ಎನ್ನ ಮನೆ ನಮ್ಬ್ರಕ್ಕೆ ಫೋನೋ ಮಣ್ಣ ಮಾಡಿದರೆ ಈ ಶಬ್ದ ಕೆಳುಲೆ ಅಕ್ಕಷ್ಟೇ,,
ಆನು ಹೇಳಿದ್ದು. ಕೇಳಿತ್ತೋ?
ಅಮ್ಬಗ ಕಾಂಬ.
ನಿಂಗಳ ಬ್ಲೋಗಿಲಿ

nanna bagge


ಮಾಡಾವು ಜೋಯಿಸರ ಒಬ್ಬನೇ ಒಬ್ಬ ಮಗ ನಾನು .ನಾನು ಈಗ ಸದ್ಯ ಮನೆಯಲ್ಲಿ ಇದ್ದೇನೆ .ಕೆಲವು ಕೆಲಸಗಳು ನನ್ನಲ್ಲಿ ಇವೆ .ಮುಖ್ಯವಾಗಿ ಉತ್ತಮ ಗೆಳೆಯರನ್ನು ಸಂಪರ್ಕ ಮಾಡುವುದು ನನ್ನ ಹವ್ಯಾಸ . ನೀವೂ ಬರುವಿರಲ್ಲ?

Friday, June 19, 2009

ನನ್ನ ಮೊದಲ ಮಾತು


ನಾನು ಮಾಡಾವು ಗಣೇಶ .


ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ .
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ,

~
ಸದಾ ನಿಮ್ಮವ,
ಗಣೇಶ್ ಭಟ್
ಮಾಡಾವು.