ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Tuesday, July 21, 2009

ಮಾನಸ ಸರೋವರ ಯಾತ್ರೆ -2

ತಾ. ೨೪-೨೬-೨೦೦೯ರನ್ದು ಬೆಳಿಗ್ಗೆ ೩.೦೦ ಘಂಟೆಗೆ ಎದ್ದು ನಿತ್ಯ ವಿಧಿಗಳನ್ನು ಮುಗಿಸಿ ಚೆನ್ನೈ ವಿಮಾನ ನಿಲ್ದಾಣಕ್ಕೆ ಹೊರಟೆವು.ಮೊದಲೇ ತಿಳಿಸಿದಂತೆ ನನ್ನ ಕೈ ಚೀಲದಲ್ಲಿ ೫.ಕೆಜಿ ದೊಡ್ಡ ಬ್ಯಾಗ್ನಲ್ಲಿ ೨೫ ಕೆಜಿ ಗೆ ಸರಿಯಾಗುವನ್ತೆ ಪ್ಯಾಕ್ ಮಾಡಿದ್ದೆ. ಅಲ್ಲಿ ನನ್ನ ದೈಹಿಕ ಪರೀಕ್ಷೆ ಮತ್ತು ಅಲ್ಲಿಯ ನಿಯಮ ಪ್ರಕಾರ ಏನೇನು ಪರೀಕ್ಷೆ ಮಾಡಬೇಕೋ ಅದೆಲ್ಲ ಮಾಡಿದರು.ಚೆನ್ನೈನಿಂದ ವಿಮಾನ ಡೆಲ್ಲಿ ಗೆ ಬೆಳಗ್ಗೆ ೬.3೦ಕ್ಕೆ ಹೊರಟಿತು. ವಿಮಾನದಲ್ಲಿ ಹೋಗುವಾಗ ನನ್ನ ಕ್ಯಾಮರಾವನ್ನು ಅಧಿಕಾರಿಗಳ ಕಣ್ಣು ತಪ್ಪಿಸಿ ಪ್ರಕೃತಿ ಮಾತೆಯನ್ನು ಸೆರೆ ಹಿಡಿಯುತ್ತಿದ್ದೆ.ಮಧ್ಯ ಮಧ್ಯದಲ್ಲಿ ಗಗನ ಸಖಿಯರು ಉಪಚಾರ ಮಾಡುತ್ತಿದ್ದರು. ಅಂತೂ ೯.೩೦ಕ್ಕೆ ನಮ್ಮ ಜೆಟ್ಕಿಂಗ್ ವಿಮಾನ ಡೆಲ್ಲಿ ತಲುಪಿತು.ಅಲ್ಲಿ ಹೊರದೇಶಕ್ಕೆ ಹೋಗುವ ಕಾರಣ imigration ಪರೀಕ್ಷೆ ನಡೆಸಿದರು.ಪಾಸ್ಪೋರ್ಟ್ ವಿಚಾರಿಸಿ ನನಗೆ ಪ್ರವಾಸೀ ವೀಸಾ ಕೊಟ್ಟು ಅದರಲ್ಲಿ ಸೀಲು ಹಾಕಿದರು.ನಂತರ ಕಾಟ್ಮಂಡು ವಿಗೆ ೧೨.೩೦ಕ್ಕೆ ಇನ್ನೊಂದು ವಿಮಾನದಲ್ಲಿ ಹೊರಟೆವು.ವಿಮಾನ ಆಗಸಕ್ಕೆ ಏರಿದ ೧ ಘಂಟೆಯಲ್ಲಿ ನಮ್ಮ ಭಾರತದ ತುತ್ತ ತುದಿ ಜಮ್ಮು ಕಾಶ್ಮೀರ ಕಾಣಿಸಿತು.ಭಾರತ ಮಾತೆ ಅಲ್ಲಿ ಮೋಡಗಳನ್ನು ಮಲ್ಲಿಗೆ ಹೂವಿನಂನ್ತೆ ಸಿಂಗರಿಸಿ ನವವಧುವಿನಂತೆ ಕಾಣುತ್ತಿದ್ದಳು.ಅದನ್ನೂ ನನ್ನ ಕ್ಯಾಮರಾದಲ್ಲಿ ಸೆರೆ ಹಿಡಿದೆ.ಭಾರತ ಮಾತೆಯ ಪುತ್ರನಾಗಿ ಜನಿಸಿದ್ದಕ್ಕೆ ಸಾರ್ಥಕವಾಯ್ತು ಎಂದು ಅನಿಸಿತು.ಇಂಥ ಮಾತೆಯನ್ನು ಪಡೆದ ನಾವೆಷ್ಟು ಪುಣ್ಯವಂತರು?ಎಂಬ ಉದ್ಗಾರ ನನಗರಿವಿಲ್ಲದೆ ಹೊರಬಂದಿತು.ಈ ರೀತಿ ಕನಸು ಕಾಣುತ್ತಿದ್ದಾಗ ಕಾಥ್ಮಂದು ಬಂದೆ ಬಿಟ್ಟಿತು.ವಿಮಾನದಿಂದ ಕೆಳಗೆ ಇಳಿದ ಕೂಡಲೇ ಚಳಿ ನನ್ನನ್ನು ಆವರಿಸಿತು ..ಆಗ ಅಲ್ಲಿಯ ಉಷ್ಣತೆ ಕೇವಲ ೪".ಅಲ್ಲಿ ಅಳಗಪ್ಪನ್ ಚೆಟ್ಟಿಯಾರ್ ಮೊದಲೇ ವ್ಯವಸ್ಥೆ ಮಾಡಿದಂತೆ ನಮ್ಮನ್ನು ಸಾಮ್ರಾಟ್ ಟ್ರಾವೆಲ್ಸ್ ನವರು ನಮ್ಮನ್ನು ಹಾರಾರ್ಪಣೆ ಮಾಡಿ ಸ್ವಾಗತ ಮಾಡಿದರು.ಅಲ್ಲಿಂದ ವೈಶಾಲಿ ವಸತಿ ಗೃಹಕ್ಕೆ ನಮ್ಮನು ಕರೆದು ಕೊಂಡು ಹೋದರು.ಆಗ ಸಮಯ ಸಂಜೆ ೪.೦೦ ಘಂಟೆ.ಬೆಳ್ಳಗೆ ೫ ಘಂಟೆಗೆ ಹೊಟ್ಟೆಗೆ ಒಂದಿಷ್ಟು ಸಜ್ಜಿಗೆ ಬಿದ್ದವನ ಸ್ತಿತಿ ಈ ಹೊತ್ತಿಗೆ ಹೇಗಿರಬೇಡ ಹೇಳಿ?ಅಂತೂ ಅಲ್ಲಿ ಊಟ ಮಾಡಿ ವಿಶ್ರಾಂತಿ ಮಾಡಿದೆ.ರಾತ್ರಿ ಊಟ ಮಧ್ಯಾಹ್ನ ಊಟ ಎಲ್ಲಾ ಒಂದೇ ಆಯ್ತ್ಹ್ಗು.ನಿದ್ರಾ ದೇವಿಯ ವಶವಾದದ್ದು ತಿಳಿಯಲೇ ಇಲ್ಲ.ನಾನು ಮಾತ್ರ ಅಲ್ಲ. ಈ ಸ್ಥಿತಿ ಯಲ್ಲಿ ನೀವೂ ಹೀಗಾಗಬಹುದು ಅಲ್ಲವೇ?

2 comments:

  1. ninna blog odi khushi aathu...
    manasa sarovara yathre mugushi bainde,intha avakasha elloringoo sikkuttille...
    neenu barada shaili laykiddu..
    ee baravanige heenge munduvariyali...

    ReplyDelete
  2. "ಭಾರತ ಮಾತೆ ಅಲ್ಲಿ ಮೋಡಗಳನ್ನು ಮಲ್ಲಿಗೆ ಹೂವಿನಂನ್ತೆ ಸಿಂಗರಿಸಿ ನವವಧುವಿನಂತೆ ಕಾಣುತ್ತಿದ್ದಳು.ಅದನ್ನೂ ನನ್ನ ಕ್ಯಾಮರಾದಲ್ಲಿ ಸೆರೆ ಹಿಡಿದೆ.ಭಾರತ ಮಾತೆಯ ಪುತ್ರನಾಗಿ ಜನಿಸಿದ್ದಕ್ಕೆ ಸಾರ್ಥಕವಾಯ್ತು ಎಂದು ಅನಿಸಿತು.ಇಂಥ ಮಾತೆಯನ್ನು ಪಡೆದ ನಾವೆಷ್ಟು ಪುಣ್ಯವಂತರು?ಎಂಬ ಉದ್ಗಾರ ನನಗರಿವಿಲ್ಲದೆ ಹೊರಬಂದಿತು."

    ಈ ಮಾತು ಓದಿ ಎಂತ ಹೇಳೆಕು ಹೇಳಿಯೇ ಗೊಂತಾವುತ್ತಿಲ್ಲೇ ಗುರುಗಳೇ ಸಿಂಪ್ಲೀ ಅಧ್ಬುತ....


    ನಿಂಗಳ,
    ಮಂಗ್ಳೂರ್ ಮಾಣಿ.

    ReplyDelete