
ಈ ಜೀವನವೇ ಅಷ್ಟೇ...... ಕಾಲ ಯಾರಿಗೂ ಕಾಯುವುದಿಲ್ಲ.. ನಮಗೂ ಸಹ... ಇದೆಲ್ಲರ ಮಧ್ಯದಲ್ಲಿ ದ್ವೇಷದ ಜೀವನ ಎಕೆ..? ಯಾರೇ ಬಂದರೂ ಸರಿ, ಅವರು ನಮ್ಮ ಮಿತ್ರರೇ ಅಗಿರಬಹುದು, ಇಲ್ಲಾ ಅಪರಿಚಿತರೇ ಅಗಿರಬಹುದು... ನಮ್ಮ ಧ್ಯೇಯ ಆದಷ್ಟು ನಗುವ ಹಂಚುವುದು.....ಕೊನೆಯಲ್ಲಿ ಅದು ಸಹ ಒಂದು ಸುಮಧುರ ನೆನಪಾಗಿ ಈ ಜಗವ ಬಿಟ್ಟು ಹೋದ ಮೇಲೂ ನಿಮ್ಮ ಪ್ರೀತಿ-ಪಾತ್ರರ ಮನದಲ್ಲಿ ಇದ್ದು ಅವರ ಜೀವನವನ್ನು ಒಂದು ಒಳ್ಳೆಯ ಆದರ್ಶವಾಗಿ ಮುಂದುವರಿಸುವುದು. ಅಲ್ವಾ??
ನಾವು ಜೀವನದ ಈ "ನಾಲ್ಕು ದಿನಗಳ" ಪಯಣವನ್ನ ಪ್ರತಿದಿನ ಉಲ್ಲಾಸದಿಂದ ಸಾಗಿಸಲೇ ಬೇಕು... ಕೆಲವೊಮ್ಮೆ ಎಂಥಾ
ಕಷ್ಟಗಳು ಬಂದರೂ ಸಹ... ಏಕೆಂದರೆ ಜೀವನ ಮರಳಿನ ಹಾಗೇ, ಕೈಯಿಂದ ಜಾರುತ್ತಲೇ ಹೋಗುತ್ತದೆ... ಪ್ರತಿ ಕ್ಷಣವು....! ನಾವು ಅದನ್ನು ಅರಿಯಲು ಹೋದರೆ ಕೊನೆಗೆ ನಾವು ಕಳೆದ ಕ್ಷಣಕ್ಕೆ ಕೊರಗ ಬೇಕು ಅಷ್ಟೆ.. ಇದ್ದ ಜೀವನವನ್ನೇ ಸುಂದರವಾಗಿ ಕಳೆದರೆ ಅದು ಮುಂದೊಂದು ದಿನ ಸುಂದರ ನೆನಪಾಗಿ ಬರುತ್ತೆ ತಾನೇ... ?? ನೆನಪು ಬರುತ್ತದೆ, ಹಾಗೇ ಹೋಗುತ್ತದೆ ಸಹ... ಆದರೂ ಕೆಲವೊಂದು ಸಲ ಆ ನೆನಪೇ ನಮ್ಮ ಜೀವನವನ್ನ ಸುಂದರಗೊಳಿಸೋದು ಅಲ್ಲವೇ? ಅವುಗಳ ಮರೆತರೆ.... ಎಂದಾದರೂ ಸಾಧ್ಯವೇ? .. ಈ ಲೋಕದಲ್ಲಿ ಕೆಲವು ಮಿತ್ರರು ಮತ್ತು ಕೆಲವು ಆಪ್ತರು ನಮ್ಮ ಪ್ರಾತಃ ಸ್ಮರಣೀಯರೇ ಅಗಿರುತ್ತಾರೆ. ಅವರಿಂದಲ್ಲವೇ ನಮ್ಮ ಬಾಳು ಇಷ್ಟು ಬೆಳೆದದ್ದು ಮತ್ತು ನಾವು ಸಮೃದ್ಧಿ ಹೊಂದದ್ದು... ಮರೆಯದೆ ಹೊಂದಿಸಿಕೊಂಡು ಹೋಗಬೇಕಾದ ಬಂಧದ ನೆನಪಿನ ಸಾಲುಗಳು ಅವು...ನಾನು ಯಾಕೆ ಈ ಪದಗಳನ್ನು ಹೇಳುತ್ತೆನೆಂದರೆ ನಮ್ಮ ಚಾರಣಿಗರ ಪೈಕಿ ಒಬ್ಬ ವ್ಯಕ್ತಿಯ ಜೀವನದ ಬಗ್ಗೆ ... ಆ ವ್ಯಕ್ತಿ ಗುರುಮೂರ್ತಿ(ಹೆಸರು ಬದಲಿಸಲಾಗಿದೆ)..ಊರು ಕೊಯಂಬತ್ತೂರು . ಅಷ್ಟೇ ನನಗೆ ಗೊತ್ತು ಆ ವ್ಯಕ್ತಿಯ ಬಗ್ಗೆ .... ನಮ್ಮ ಮಾತುಗಳು ಮುಗಿದಿದ್ದವು. ಮನಸ್ಸು ಸಂತಸಗೊಂಡಿತು...ಆದರೂ ಹೃದಯಕ್ಕೆ ನಮ್ಮಿಂದ ಅದೇನೋ ಬೇಕಿತ್ತು ಆ ದಿನ.. ಮಾತಿನಲ್ಲಿಯೇ ಕಳೆದು ಹೋಗಿತ್ತು ಅದೇಷ್ಟೋ ಕ್ಷಣ.... ಸಮಯ ಅಂದಾಜು ಬೆಳಿಗ್ಗೆ ೧೦.೩೦ ... ನಾವು ದೆರಾಪುಕ್ ನಿಂದ ಕೈಲಾಸದ ಪಶ್ಚಿಮ ಭಾಗವಾದ ಗೌರೀ ಕುಂಡದತ್ತ ಹೆಜ್ಜೆ ಹಾಕುತ್ತಿದ್ದೆವು. ಕೆಲವರು ದೇರಾಪುಕ್ ನಿಂದ ಸುಮಾರು ೨ ಕಿಲೋ ಮೀಟರು ದೂರದಲ್ಲಿ ನೇರವಾಗಿ ಕೈಲಾಸದಿಂದಲೇ ಹರಿದು ಬರುತ್ತಿರುವ ಮಂಜಿನ ಹೊಳೆಯಲ್ಲಿ ಅಲ್ಲಿರುವ ಶಿವಲಿಂಗ ಸ್ವರೂಪದಂತೆ ಇರುವ ಕಲ್ಲಿಗೆ ಪೂಜೆ ಮಾಡುತ್ತಾ ಇದ್ದರು. ನಾನು ಅವುಗಳನ್ನೆಲ್ಲ ಗಮನಿಸುತ್ತ ನನ್ನಷ್ಟಕ್ಕೆ ನಮ್ಮ ಗುಂಪಿನವರೊಡನೆ ಸೇರಿ ಮುಂದೆ ನಡೆದೆ.. ಸುಮಾರು ೩೫ ಜನರ ತಂಡ ನಮ್ಮದಾಗಿದ್ದರಿಂದ ಬೇರೆ ಬೇರೆ ಗುಂಪುಗಳಲ್ಲಿ ನಾವು ಚಾರಣ ಮಾಡುತ್ತಿದ್ದೆವು. ನಮ್ಮ ತಂಡ ಸುಮಾರು ಎಲ್ಲರಿಗಿಂತ ಮುಂದೆ ಇತ್ತು. ಅದೊಂದು ತಬ್ಬಲಿ ದಿನ . ಕರುಳು ಕೊರೆಯುವ ಚಳಿ... ಗಡಿಯಾರದ ಮುಳ್ಳು ಹತ್ತರ ಹತ್ತಿರ ಬರುತ್ತಿತ್ತು...ನಮ್ಮ ಶೇರ್ಪಾ ನ ಕಾಡ್ ಲೆಸ್ ರಿಂಗಣಿಸಿತು..ಅತ್ತ ಕರೆಯಿಂದ ಶೆರ್ಪಾನ ಉತ್ತರ.ಭಾಷೆ ಬರದ ನಮ್ಮಿಂದ ಶೆರ್ಪಾನಲ್ಲಿ ಮೌನದ ಮೂಲಕ ಪ್ರಶ್ನೆ.ಏನಾಯಿತು?ಎಂದು ಕೇಳಿದೆವು.. ನೀವು ಇಲ್ಲೇ ನಿಲ್ಲಿ..ಎಂದು ನಮ್ಮನ್ನು ಕುದುರೆಗಳಿಂದ ಕೆಳಗಿಳಿಸಿ ನಮ್ಮಲ್ಲಿನ ಒಂದು ಕುದುರೆಯನ್ನು ಆತ ಕೇಳಿ ವೇಗವಾಗಿ ದೇರಪುಕ್ ನತ್ತ ಹೋದ. ಏನೂ ತಿಳಿಯದ ನಮಗೆ ಭಯವಾಯಿತು.
ಸುಮಾರು ಒಂದು ಘಂಟೆಯಷ್ಟು ಕಾಲ ನಮ್ಮ ತಂಡ ಶೇರ್ಪಾನಿಗೆ ಕಾಡು ಕುಳಿತೆವು. ಸಮಯ ಮಧ್ಯಾಹ್ನ ೩.೦೦ ಘಂಟೆ,ಒಂದೆಡೆ ಹೊಟ್ಟೆ ಹಸಿಯುತ್ತಿತ್ತು. ಆ ಕ್ಷಣ ಹೆಲಿಕಾಪ್ಟರ್ ಶಬ್ದ ಕೇಳಿಸಿತು.ಮಂಜಿನಲ್ಲಿ ಅದರ ಶಬ್ದ ಕೇಳಿಸುವುದಲ್ಲದೆ ಹೆಲಿಕಾಪ್ಟರ್ ಕಾಣಿಸಲಿಲ್ಲ.ಅಂತೂ ನಮ್ಮ ಹತ್ತಿರವೇ ಹೋದದ್ದು ಸ್ಪಷ್ಟ..ಆಗ ನಮ್ಮ ಭಯ ಮತ್ತಷ್ಟು ಹೆಚ್ಚಿತು.ಸುಮಾರು ೪.೦೦ ಘಂಟೆಯಾಗುವಾಗ ಶೇರ್ಪಾ ಬಂದ.ಅವನ ಮನಸಿನಲ್ಲಿ ಏನೋ ಭಯ,ದುಖ ಕಂಡಿತು.ಆಗ ನಮ್ಮ ಪಂದೆಯವರೂ ಜೊತೆಗೆ ಇದ್ದರು.ಅವರಲ್ಲಿ ಏನಾಯಿತು? ಎಂದು ಕೇಳಿದೆವು. ಆಗ ನಿಮ್ಮ ತಂಡದ ಗುರುಮೂರ್ತಿ ಎಂಬವರು ಆಮ್ಲಜನಕದ ಕೊರತೆಯಿಂದ ನಿಮೆಲ್ಲರನ್ನು ಬಿಟ್ಟು ಹೋಗಿದ್ದಾರೆ.ಎಂದರು.ಆಗ ನಮ್ಮ ಜಂಘಾ ಬಲವೇ ಉಡುಗಿ ಹೋಯಿತು.ಇನ್ನು ನಮ್ಮ ಪರಿಸ್ಥಿತಿ ಏನೋ?ಮನೆಯಲ್ಲಿ ನಮ್ಮನ್ನು ನಂಬಿಕೊಂಡು ಬದುಕುತ್ತಿರುವ ವ್ಯಕ್ತಿಗಳನ್ನು ಕೈಲಾಸನಾಥನೆ ನಮ್ಮನ್ನು ರಕ್ಷಿಸಬೇಕು ಎಂದು ಪ್ರಾರ್ಥನೆ ಮಾಡಿದೆವು. ನಮ್ಮ ಬಳಿ ಇರುವ ಆಮ್ಲಜನಕದ ಸಿಲಿಂಡರ್ ನ ವೇಗವನ್ನು ಕಡಿಮೆ ಮಾಡಿಕೊಂಡೆವು.ಅದುವರೆಗೆ ೮.೦೫ ವೇಗದಲ್ಲಿ ಉಸಿರಾದುತ್ತಿದ್ದೆವು.ಈಗ ೬.೦೦ ಗೆ ಮಾಡಿಕೊಂಡೆವು. ಅಷ್ಟೊತ್ತಿಗೆ ಗುರುಮೂರ್ತಿ ಜೊತೆಗೆ ಇರುವ ತಂಡ ನಮ್ಮ ತಂಡದ ಜೊತೆ ಸೇರಿದರು.ನಾವು ಅವರಲ್ಲಿ ನಡೆದ ವಿಷಯವನ್ನು ಕೇಳಿದೆವು.ಆಗ ದೆರಪುಕ್ ನಲ್ಲಿ ನಾವು ನೋಡಿದ ಮಂಜಿನ ಹೊಳೆಯಲ್ಲಿ ಶಿವಲಿಂಗ ಸ್ವರೂಪದ ಕಲ್ಲಿಗೆ ಪೂಜೆ ಮಾಡಿ ಆ ತೀರ್ಥವನ್ನು ಅವರು (ಗುರುಮೂರ್ತಿ)ಸ್ನಾನ ಮಾಡಿದರಂತೆ.ಆಗ ಮೈ ತಣ್ಣಗಾಗಿ ರಕ್ತ ಹೆಪ್ಪುಗಟ್ಟಿತು. ಆಗ ಅವರಲ್ಲಿದ್ದ ಆಮ್ಲಜನಕದ ಸಿಲಿಂಡರ್ ಖಾಲಿಯಾಗಿತ್ತು.ಆಗ ಅವರ ಗುಂಪಿನವರ ಸಿಲಿಂಡರ್ ಮೂಲಕ ಆಮ್ಲಜನಕವನ್ನು ವರ್ಗಾಯಿಸುವಷ್ಟು ಸಮಯ ಅವರ ದೇಹ ಆ ಪರಿಸ್ಥಿತಿಯನ್ನು ತಾಳಿಕೊಳ್ಳಲಿಲ್ಲ..ಆ ಕೂಡಲೇ ನಮ್ಮ ಶೇರ್ಪಾ ತಂಡದವರು ಚೀನಾ ಮಿಲಿಟರೀ ಪಡೆಯನ್ನು ಸಂಪರ್ಕಿಸಿ ತಕ್ಷಣ ಆಮ್ಲಜನಕದ ಹೆಲಿಕಾಪ್ಟರ್ ಬರುವಂತೆ ಕರೆ ಮಾಡಿದರು.ಹೆಲಿಕಾಪ್ಟರ್ ಬರುವಷ್ಟರಲ್ಲಿ ಗುರುಮೂರ್ತಿ ಮೈ ತಣ್ಣಗಾಗಿಗೆದೆ.ಉಸಿರಾಟದ ಶಬ್ದ ಕೇಳಿಸುತ್ತಾ ಇಲ್ಲ ಎಂದು ಹೇಳಿದಾಗ ನಾವು ಇನ್ನು ಜೀವ ಸಹಿತ ನಮ್ಮೂರು ಮುಟ್ಟುವುದು ಸಂಶಯ ಎಂದನಿಸಿತು.ಮನಸ್ಸಿನಲ್ಲಿಯೇ ಗುರುಮೂರ್ತಿ ಆರೋಗ್ಯ ಬೇಗನೆ ಸುಧಾರಿಸಲಿ ಎಂದು ಪ್ರಾರ್ಥಿಸಿ ಮುಂದೆ ನಡೆದೆವು.ಅಲ್ಲಿಂದ ಮುಂದೆ ನನ್ನ ಪ್ರತೀ ಹೆಜ್ಜೆಯೂ ಓಂ ನಮಶಿವಾಯ ದಿಂದ ಕೂಡಿತ್ತು.ಜೀವ ಸಹಿತ ನನ್ನ ಮನೆಯವರನ್ನು ಕಾಣಬೇಕು ಎನ್ನುವ ಆತುರ ಜಾಸ್ತಿಯಾಯಿತು.ಸತ್ತರೂ ಚಿಂತಿಲ್ಲ ..ಮನೆಯವರಿಗೆ ತಿಳಿಯಬೇಕು.ನಮ್ಮಿಂದ ಹಿಂದೆ ಇಡೀ ಜೀವನವನ್ನೇ ಮಾನಸ ಮತ್ತು ಕೈಲಾಸವನ್ನು ಭಾರತಕ್ಕೆ ಸೇರಿಸಲು ಪ್ರಾಣತ್ಯಾಗ ಮಾಡಿದ ಯೋಧರಿಗೆ ಹೋಲಿಸಿದರೆ ನಮ್ಮ ಪ್ರಾಣ ಏನೂ ದೊಡ್ಡದಲ್ಲ ಎಂದನಿಸಿತು. ಅಂಥಹ ಯೋಧರಿಗೆ ನಮ್ಮ ನಮನವನ್ನು ಸಲ್ಲಿಸಿ ಅಲ್ಲಿಂದ ಮುಂದಕ್ಕೆ ನಡೆದೆವು.
ಗುರುಗಳೇ,
ReplyDeleteಕೇಳಿ ಬೇಜಾರಾತು. ನಿಂಗಳ ಬರವಣಿಗೆಯ ಧಾಟಿಲೇ ಎಂತದೋ ಆಯಿದು ಹೇಳಿಪ್ಪ ಸಂಶಯ ಬಂದಿತ್ತು. ಆದರೆ ಹೀಂಗೆ ಅಕ್ಕು ಹೇಳಿ ಗ್ರೇಶಿದ್ದಿಲ್ಲೇ.... feeling sorry for him...
ನಿಂಗಳ,
ಮಂಗ್ಳೂರ್ ಮಾಣಿ.
ಗಣೇಶ್, ಚಾರಣದ ಚಿತ್ರ ಮತ್ತು ವಿವರಣೆಯ ಬ್ಲಾಗ್ ಗಳು ಬಹಳ ಕಡಿಮೆ. ನಿಮ್ಮ ಈ ಪ್ರಯತ್ನ ಸ್ವಾಗತಾರ್ಹ. ಮುಂದುವರೆಸಿ...ಅಭಿನಂದನೆಗಳು
ReplyDeleteChennagide
ReplyDelete