ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Monday, January 4, 2010

ಮಾನಸ ಸರೋವರ ಯಾತ್ರೆ - ೨೪

ಭಾರತದೇಶದ ಎಲ್ಲಾ ಕುಟುಂಬಗಳು "ನಮ್ಮ ಮಕ್ಕಳು ಚೆನ್ನಾಗಿದ್ರೆ ಸಾಕು, ದೇಶಕಾಯೋ ಕೆಲಸ ನಮಗೆ ಯಾಕೆ ಬೇಕು !!!"
ಅಂದ್ರೆ ದೇಶ ಕಾಯುವ ಕೆಲಸ ಯಾರು ಮಾಡಬೇಕು?
ಬೇರೆ ದೇಶದವರಿಗೆ ಗುತ್ತಿಗೆ[out source]ಕೊಡಬೇಕೇ?

ನಮ್ಮಲ್ಲೇಕೆ ಪ್ರತಿಯೊಂದು ಕುಟುಂಬದಲ್ಲಿ ೧೬ ವರ್ಷ ತುಂಬಿದ ಗಂಡು- ಹೆಣ್ಣು ಮಕ್ಕಳು ಯಾವುದೇ ಜಾತಿ-ಮತ ಭೇದವಿಲ್ಲದೆ,
ಹಣದ ಅಂತಸ್ತಿನ ಭೇದವಿಲ್ಲದೆ ಕನಿಷ್ಠ ೧೦ ವರ್ಷ ಮಿಲಿಟರಿ ಶಿಕ್ಷಣಕ್ಕೆ ಒಳಪಟ್ಟು,
ಕನಿಷ್ಠ ಒಂದು ವರ್ಷ ದೇಶದ ಗಡಿ ಕಾಯುವ ಕೆಲಸ ಮಾಡಬೇಕೆಂದು ಸರ್ಕಾರ ಕಾನೂನು ಮಾಡಬಾರದು?
ಮಾಡಿದರೆ ಹೇಗಿರುತ್ತದೆ? ಇದರಿಂದ ದೇಶದ ಸಮಸ್ಯೆಯ ವಾಸ್ತವ ಸ್ತಿತಿ ಪ್ರತಿ ಭಾರತಿಯ ಕುಟುಂಬಕ್ಕೂ ಅರಿವಾಗಿ ನಾವು ನಿಜವಾದ ಭಾರತಿಯರಾಗುವುದಿಲ್ಲವೇ?

ಈಗಾಗಲೇ ಕೆಲವು ರಾಷ್ಟ್ರಗಳಲ್ಲಿ ಇದು ಜಾರಿಯಲ್ಲಿದ್ದು, ನಮ್ಮ ದೇಶ ದಲ್ಲಿ ಜಾರಿಗೆ ಬಂದರೆ ದೇಶಕ್ಕೆ ಅನುಕೂಲ ಅಲ್ಲವೇ?
ನಾನು ಕಂಡಂತೆ ಚೀನಾದಲ್ಲಿ ಪೋಲೀಸ್ ,ಕೋರ್ಟ್ ವ್ಯವಸ್ಥೆ ಇಲ್ಲ.

ಎಲ್ಲಾ ಕ್ಷೇತ್ರದಲ್ಲಿ ಮಿಲಿಟರೀ ತೀರ್ಮಾನ ಅಂತಿಮ..

ಅದೇ ರೀತಿ ನಮ್ಮಲ್ಲಿ ಪ್ರತಿಯೊಬ್ಬ ಭಾರತೀಯನೂ ಮಿಲಿಟರೀಯಲ್ಲಿ ಕನಿಷ್ಠ ಸೇವೆ ಸಲ್ಲಿಸಿದಲ್ಲಿ ನಮ್ಮ ದೇಶ ಎಂದೋ ಉನ್ನತ ಮಟ್ಟಕ್ಕೆ ತಲುಪಿಅನೇಕ ರೀತಿಯಲ್ಲಿ ಮಾದರಿಯಾಗುತ್ತಿತ್ತು ಅಲ್ಲವೇ?.


(ಚೈನಾ ಮಿಲಿಟರಿ ಅಧಿಕಾರಿ)





(ಚೈನಾದವರ ಜೊತೆ ನೆಹರು)

ದಾರ್ಚಿಂಗ್‌ನಲ್ಲಿ ನಾವು ನೇಪಾಳಕ್ಕೆ ಕಾರಿನಲ್ಲಿ ಬರುತ್ತಿದ್ದಾಗ ನಮ್ಮ ಡ್ರೈವರ್ ತುತೋಯಿ ಜತೆ ಅಲ್ಲಿನ ಆಡಳಿತ ವ್ಯವಸ್ಥೆ ಬಗ್ಗೆ ಮಾತಾಡುತ್ತಿದ್ದೆವು.
ಅವನು ಚೀನಾದ ಬಗ್ಗೆ ನಮಗೆ ಅಲ್ಲಿನ ಭೂಪಟವನ್ನು ದಾರಿ ಮಧ್ಯದಲ್ಲಿ ಕಾರ್ ನಿಲ್ಲಿಸಿರುವಾಗ ವಿವರಣೆ ನೀಡುತ್ತಿದ್ದ.

ಅವನು ಟಿಬೆಟ್ ದೇಶದವನು.
ಅವನು ಅಲ್ಲಿನ ಮತ್ತು ಭಾರತದ ಸಂಬಂಧವನ್ನು ಹೇಳುತ್ತಿದ್ದ.
ಆಗ ನಮ್ಮ ದೇಶದ ಬಗ್ಗೆ ಎಂಥವರಿಗೂ ಪ್ರೇಮ ಉಕ್ಕಿ ಬರಬಹುದು.
ಟಿಬೆಟ್ ಚೀನಾ ಆಕ್ರಮಣ ಕಥೆಯನ್ನು ಕೇಳುವಾಗ ಮೈ ರೋಮಾಂಚನವಾಗುತ್ತದೆ.
ನಾವು ಆಗ ಟೆಬೆಟ್ ದೇಶದ ತವಾಂಗ್ ಎನ್ನುವ ಪ್ರದೇಶಕ್ಕೆ ಸಮನ್ಧಿಸಿದ ಸ್ಥಳದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದೆವು..
ಆಗ ಅಲ್ಲಿನ ಪ್ರದೇಶದ ಬಗ್ಗೆ ಅವನು ವಿವರಣೆ ನೀಡುತ್ತಿದ್ದ..
ತವಾಂಗ್'! ಇತ್ತೀಚಿಗೆ ಬಹಳ ಸುದ್ದಿ ಮಾಡುತ್ತಿದೆ. ದೆಹಲಿ-ಬೀಜಿಂಗ್ ಮಧ್ಯೆ ಉರಿಯುತ್ತಿರುವ ಬೆಂಕಿಗೆ 'ತವಾಂಗ್' ತುಪ್ಪ ಸುರಿಯುತ್ತಿದೆ. "ನೀವು - ಭಾರತೀಯರು ೧೯೬೨ ರ ಅನುಭವವನ್ನ ಮರೆತಿದ್ದಿರ!" ಅಂತ ಚೀನಿಗಳು ಬಹಿರಂಗವಾಗೇ ಹೇಳುವ ದಾರ್ಷ್ಟ್ಯ ತೋರುತಿದ್ದಾರೆ.

ಚೀನಿಗಳ ಬೆದರಿಕೆ ಬಗ್ಗೆ ಮಾತಡುವುದಕ್ಕಿಂತ ಮೊದಲು, ಏನಿದು 'ತವಾಂಗ್' ಅದಕ್ಕಾಗಿ ಯಾಕಿಷ್ಟು ಕಿತ್ತಾಟ? ಇದು ಯಾರಿಗೆ ಸೇರಿದ್ದು?
ಭಾರತೀಯರಿಗೋ? ಚೀನಿಗಳಿಗೋ? ಈ ಮೊದಲು ಇದು ಯಾರಿಗೆ ಸೇರಿತ್ತು? ಅಂತ ನೋಡ ಹೊರಟರೆ,
ಐತಿಹಾಸಿಕಾವಾಗಿ ಅಂದರೆ ೧೯೧೪ರಲ್ಲಿ ಬ್ರಿಟಿಷರು ಮೆಕ್-ಮಹೂನ್ ರೇಖೆಯನ್ನ ಗುರುತಿಸುವವರೆಗೂ ಅದು ಆಗಿನ 'ಟಿಬೆಟ್' ಗೆ ಸೇರಿತ್ತು.
೧೯೧೪ರಲ್ಲಿ ತವಾಂಗ್ ಅನ್ನು ೧೩ನೆ ಲಾಮ ಭಾರತಕ್ಕೆ ಬಿಟ್ಟು ಕೊಟ್ಟರು.ಆ ನಂತರ ಬಂದ ೧೪ನೆ ಅಂದರೆ ಈಗಿನ 'ದಲೈ ಲಾಮ' ಕೂಡ ತವಾಂಗ್ ಅನ್ನು ಭಾರತದ ಅಂಗವೆಂದೇ ಮಾನ್ಯ ಮಾಡಿದರು.
ಆದರೆ ೧೯೫೦ ರ ದಶಕದಲ್ಲಿ ಚೀನಿಗಳು 'ಟಿಬೆಟ್' ಅನ್ನು ಆಕ್ರಮಿಸಿಕೊಂಡರಲ್ಲ. ಈಗ ಅವರು ಹೇಳುವುದು ,
'ಒಂದು ಕಾಲದಲ್ಲಿ ತವಾಂಗ್ ಟಿಬೆಟ್ ಗೆ ಸೇರಿತ್ತು, ಈಗ ಟಿಬೆಟ್ ನಮಗೆ ಸೇರಿದೆ, ಹಾಗಾಗಿ ಈ ತವಾಂಗ್ ನಮಗೆ ಸೇರಬೇಕು' ಅಂತ

(ಅದರ ಜೊತೆಗೆ ಇರಲಿ ಅಂತ ಇಡಿ ಅರುಣಾಚಲ ಪ್ರದೇಶ ಕೊಡಿ ಅಂತಿದ್ದಾರೆ).
ಟಿಬೆಟ್ ಅನ್ನು ಚೀನಾ ಆಕ್ರಮಿಸಿಕೊಂಡಾಗ ವಿಶ್ವದ ರಾಷ್ಟ್ರಗಳೆಲ್ಲ ಚೀನಾ ತಪ್ಪು ಮಾಡಿದೆ ಅಂತ ವಿಶ್ವ ಸಂಸ್ಥೆಯಲ್ಲಿ ಮಾತಾಡ ಹೊರಟರೆ, ನೆಹರು ಅದು ಚೀನಿಗಳ ಆಂತರೀಕ ವಿಷಯ ನಾವು ಮಾತಾಡೋದೇ ತಪ್ಪು, ಸುಮ್ಮನೆ ಇರಿ ಅಂತ ಹೇಳಿದರು.! ಅಲ್ಲಿಗೆ ಟಿಬೆಟಿಯನ್ನರದು ಅರಣ್ಯ ರೋದನವಾಯ್ತು. ಮುಂದೊಂದು ದಿನ ಇದೆ ಟಿಬೆಟ್ ಅನ್ನು ಭಾರತದ ಮೇಲೆ ಸವಾರಿ ಮಾಡಲು ಚೀನಿಗಳು ಬಳಸಬಹುದು ಎನ್ನುವ ಸಾಮನ್ಯ ಜ್ಞಾನವು ನೆಹರು ಸೇರಿದಂತೆ ಯಾವ ನಾಯಕರಿಗೆ ಅನ್ನಿಸಲೇ ಇಲ್ಲ. ಟಿಬೆಟ್ ಅನ್ನು ಆಕ್ರಮಿಸಿದ ನಂತರ ಚೀನಿಗಳು, ಗಡಿಯುದ್ದಕ್ಕೂ ರಸ್ತೆ,ಬಂಕರ್ಗಳನ್ನ ನಿರ್ಮಿಸಿದರು, ಸೇನಾ ಜಮಾವಣೆ ಮಾಡಿದರು.
ಆದರೆ ನಮ್ಮ ಅಧಿಕಾರಿ ವರ್ಗ,ವಿರೋಧ ಪಕ್ಷ ಎಲ್ಲ ಎಲ್ಲರೂ ಧೀರ್ಘ ನಿದ್ರೆಯಲಿದ್ದರು. ಜನರಲ್ ತಿಮ್ಮಯ್ಯನಂತಹ ದಕ್ಷ ಮಿಲಿಟರಿ ಅಧಿಕಾರಿ ಮುಂದೆ ಇಂತ ಅನಾಹುತವನ್ನ ಊಹಿಸಿ ಮಿಲಿಟರಿ ಬಲಪಡಿಸ ಹೊರಟರೆ, ಅದಕ್ಕೆ ಅಡ್ಡಗಾಲು ಹಾಕಿದ್ದು ರಕ್ಷಣಾ ಮಂತ್ರಿ ಕೃಷ್ಣನ್ ಮೆನನ್!. ಈತನ ರಾಜಕೀಯದಿಂದ ಬೇಸತ್ತ ತಿಮ್ಮಯ್ಯ ರಾಜಿನಾಮೆ ಕೊಟ್ಟರು .ಅರೆ! ಈ ಕೃಷ್ಣನ್ ಮೆನನ್!ಯಾರು? ನಾನು ಇದುವರೆಗೂ ಆ ವ್ಯಕ್ತಿಯ ಹೆಸರು ಕೇಳಿರಲಿಲ್ಲ..
ನಮ್ಮ ದೇಶದ ಆಡಳಿತದ ಬಗ್ಗೆಯೂ ತುತೋಯಿ ಗೆ ಗೊತ್ತು ಅಂದಾಗ ನಮಗೆ ತುಂಬಾ ಖುಷಿಯಾಯಿತು..
ಅವನು ಭಾರತದ ಬಗ್ಗೆ ತಿಳಿದುಕೊಂಡಿದ್ದ! ನನಗೇ ನಾಚಿಗೆಯಾಯಿತು.. ನಮ್ಮ ದೇಶದಲ್ಲಿ ನಮಗಾಗಿ ನಮ್ಮ ನೆಲವನ್ನು ಉಳಿಸಲು ಹೋರಾಡಿದ ಜನರಲ್ ತಿಮ್ಮಯ್ಯನಂತಹ ಮೇರು ವ್ಯಕ್ತಿಯ ಬಗ್ಗೆ ಗೊತ್ತಿರಲಿಲ್ಲ.!!!

ಇನ್ನು ಜಾಗೃತವಾಗುತ್ತೇನೆ.!!!!!!!

(ಕಾಶ್ಮೀರ ಕದ್ದ ಚೀನಾ)

೧೯೮೧ರಿಂದಲೂ, ಚೀನಾ – ಭಾರತದ ಗಡಿ ವಿವಾದ ಚರ್ಚೆ ಈಗಲೂ ನಡೆಯುತ್ತಲೇ ಇದೆ.
ಈ ಮಾತುಕತೆ ಆಧುನಿಕ ದೇಶಗಳ ಇತಿಹಾಸದಲ್ಲೇ ಒಂದು ದಾಖಲೆ ನಿರ್ಮಿಸಿದೆ: ವಿಪರೀತ ವಿಳಂಬಕ್ಕಾಗಿ!
ಈ ಚರ್ಚೆಯ ಮೇಲೆ ಪೂರ್ಣ ಹಿಡಿತ ಸಾಧಿಸುವುದೇ ಚೀನಾದ ಕುತಂತ್ರ ಎಂದು ರಕ್ಷಣಾ ತಜ್ಞರು ಹೇಳುತ್ತಾರೆ.
ಚೀನಾದ ಬೇಡಿಕೆ ಸರಳ: ಅರುಣಾಚಲ ಪ್ರದೇಶದ ಕೇವಲ ಶೇ. ೨೮ರಷ್ಟು ಪ್ರದೇಶವನ್ನು ಕೊಟ್ಟರೆ ಸಾಕು.
ಇದು ಚೀನಾ ಇನ್ನೂ ನುಂಗಬೇಕಿರುವ ತೈವಾನ್ ದೇಶದ
ಗಾತ್ರಕ್ಕೆ ಸಮ ಅಂತ ಚೀನಾ ಹೇಳುವ ಮಾತು...!


"ಚೀನಾ ನಂಬಿ ಮೂರ್ಖರಾಗುವುದು ಬೇಡ..!!"
ಈ ಮಾತನ್ನು ತುತೊಯಿ ಪದೇ ಪದೇ ಹೇಳುತ್ತಿದ್ದ.. ಅವನಲ್ಲಿ ಚೀನಾದ ಬಗ್ಗೆ ಅಷ್ಟು ದ್ವೇಷ ಕುದಿಯುತ್ತಲಿತ್ತು...
ಅವನ ಭಾಷೆ ಟಿಬೆಟ್ ಆದರೂ ಅವನಿಗೆ ಅಲ್ಪ ಸ್ವಲ್ಪ ಇಂಗ್ಲಿಷ್ ಬರುತ್ತಿತ್ತು.
ಆದರೂ ಅವನ ಮುಖ ಚರ್ಯೆಯಿಂದ ಅವನ ಭಾಷೆ ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತಿತ್ತು.

ಮಧ್ಯೆ ಮಧ್ಯೆ ತುತೋಯಿ ಚೀನಾ ದೇಶದ ಬಗ್ಗೆ ಹಾಸ್ಯ ಮಾಡುತ್ತಿದ್ದ.
ಚೀನಾದವರು ಏಕೆ ಕ್ರಿಕೆಟ್ ಆಡುವುದಿಲ್ಲ?
ಚೀನಾ ದವರು ಕ್ರಿಕೆಟ್ ಆಡಿದರು ಅಂತ ಅಂದುಕೊಳ್ಳಿ..
ಅವರ opening batsman ಒಬ್ಬ ತುಂಬಾ ಚೆನ್ನಾಗಿ ಆಡುತ್ತಿದ್ದ ಅಂದುಕೊಳ್ಳಿ.
ಅವನನ್ನು ನಮ್ಮವರು ತುಂಬಾ ಕಷ್ಟಪಟ್ಟು out ಮಾಡಿದರು ಅಂತ ಅಂದುಕೊಳ್ಳಿ - ಅದಕ್ಕೇ ಅವರಿಗೆ ಕ್ರಿಕೆಟ್ ಆಡಲು ಐ ಸಿ ಸಿ ಯವರು ಅವಕಾಶ ಮಾಡಿಕೊಟ್ಟಿಲ್ಲ..!! :-)

(ಮರೆಯಲಾರದ ತುತೋಯಿ ಸಾಂಗತ್ಯ)

ಸಂಜೆ ೪.೦೦ ಘಂಟೆ..
ಆ ಸಮಯಕ್ಕೆ ಸೂರ್ಯನ ಕಿರಣಗಳು ಪರ್ವತ ಶಿಖರಗಳನ್ನು ಚುಂಬಿಸುತ್ತಿದ್ದವು.
ಅದೆಂತಹ ದೃಶ್ಯ!!
ಬಿಳಿಯ ಮಂಜು ಸೂರ್ಯನ ಆ ಪ್ರಥಮ ಕಿರಣಗಳಿಂದ ಹೊನ್ನಿನ ಬಣ್ಣಕ್ಕೆ ತಿರುಗಿ ಸುವರ್ಣ ಪರ್ವತಗಳಂತೆ ಕಾಣಿಸುತ್ತಿದ್ದವು.
ಇಂದಿಗೂ ಆ ದೃಶ್ಯಗಳು ಕಣ್ಣಿಗೆ ಕಟ್ಟಿದಹಾಗಿವೆ!
ಪ್ರಕೃತಿಯ ಚಲುವು ಇಲ್ಲಿ ಸೊಂಪಾಗಿದೆ - ಸೌಂದರ್ಯ ಸರಸ್ವತಿಯೇ ಧರೆಗಿಳಿದುಬಂದಂತೆ.
ಇದನ್ನು ನೋಡುತ್ತ ಅದೇನೋ ಒಂದು ತರಹದ ಶಾಂತಿ, ಸಮಾಧಾನದ ಮನೋಭಾವ!!!!!
ನಾವು ಆಗ ಸಗಾ ಎಂಬ ಪಟ್ಟಣಕ್ಕೆ ತಲುಪುತ್ತಾ ಇದ್ದೆವು.. ಆ ರಾತ್ರಿ ಇಲ್ಲಿ ವಿಶ್ರಾಂತಿ.
ಹಾಸಿಗೆ ಎಂಬುದನ್ನು ಕಾಣದೇ ಎಷ್ಟೋ ದಿನಗಳಾಗಿದ್ದವು... ರೂಮಿನಲ್ಲಿ ಚೈನೀ ಭಾಷೆಯಲ್ಲಿ ಲಘುಸಂಗೀತ ಕೇಳುತ್ತಲಿತ್ತು..
ಹಾಗೆಯೇ ಆ ಸಂಗೀತಕ್ಕೆ ನನ್ನ ದೇಹ ನಿದ್ರೆಯನ್ನಾವರಿಸಿತು.
ಕಣ್ಣೆರಡು ಮುಚ್ಚಿ ಹೊದಿಕೆಳೆದು ಆ ಸುಂದರ ರಾತ್ರಿಗಳಲ್ಲಿ ನಿದ್ದೆಗೆ ಜಾರಿದ್ದೆ..
ನಮ್ಮ ಪ್ರಯಾಣ ಎಷ್ಟು ಮಧುರವಾಗಿತ್ತು ಎಂದರೆ, ಕಣ್ತೆರೆದರೆ ಸುಂದರ ಲೋಕ, ಮುಚ್ಚಿದರೆ ಸ್ವಪ್ನ ಲೋಕಕ್ಕೆ..

ನಾನು ಪಯಣ ಬೆಳೆಸುತಲಿದ್ದೆ...

2 comments:

  1. Hello! Am here via mschsnirchal.
    The Himalaya photos look very interesting. Tumba purusottu maadiyondu ninna manasa sarovarayatre bagge odekku.
    Best wishes,
    Soumya.

    ReplyDelete