ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Sunday, June 21, 2009

ನನ್ನ ಬಾಲ್ಯ,ನನ್ನ ಬಗ್ಗೆ ಈಗ ಪರಿಚಯ ಇರುವರು ಕಮ್ಮಿ.ನಾನು ಬಾಲ್ಯದಲ್ಲಿ ೭ ನೆ ತರಗತಿವರೆಗೆ ಕೆಯ್ಯೂರು ಶಾಲೆಗೆ ಹೋಗಿದ್ದೆ.ಆ ಅನುಭವಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ. ೧೯೮೭ ಮೇ ೩೧ ರಂದು ನನ್ನ ಅಪ್ಪ ನನ್ನನ್ನು ಶಾಲೆಗೆ ಕರೆದುಕೊಂಡು ಹೋದರು.. ಶಾಲೆ ಎಂದರೆ ಏನೆಂದು ಅರಿಯದ ನನಗೆ ಏಕಾ ಏಕಿ ನನಗೆ ವೆಂಕಪ್ಪ ಮಾಷ್ಟ್ರನ್ನು ಕಂಡಾಗ ಮತ್ತು ಅವರ ದೊಡ್ಡ ಸ್ವರ ಕೇಳಿದಾಗ ಒಂದು ಕ್ಷಣ ನಡುಗಿ ಹೋಗಿದ್ದೆ. ನಿಂಗೆ ೧ ೨ ಬರುತ್ತಾ ಎಂದು ಕೇಳಿದರು."ಬರುತ್ತದೆ" ಎಂದು ಹೇಳಿದೆ ಕೈ ಕಟ್ಟಿಕೊಂಡು.ನನಗೆ ಅಜ್ಜ ಅಷ್ಟರವರೆಗೆ ಮೇಷ ,ವೃಷಭ, ಚೈತ್ರ ,ವೈಶಾಖ,ಅಶ್ವಿನಿ ಭರಣಿ,ಪ್ರಭವ ವಿಭವ ದ ಮಧ್ಯೆ ಇದನ್ನೂ ಹೇಳಿಕೊಡುತ್ತಿದ್ದರು. ಹಾಗಾದ ಕಾರಣ ಸ್ವಲ್ಪ ಧೈರ್ಯ ಮಾಡಿ ಹೇಳಿದೆ,ಅಲ್ಲಿಗೆ ಸಂದರ್ಶನ ಮುಗಿಯಿತು, ಮರುದಿನ ಶಾಲೆ, ನನಗೆ ಮೇಡಂ ಆಗಿ ಬಂದವರು ಲಲಿತ ಮೇಡಂ,ತುಂಬಾ ಮಾತೃ ವಾತ್ಸಲ್ಯ ದ ಮನಸ್ಸು,ನಾನು ಲೆಕ್ಕ ದಲ್ಲಿ ಸ್ವಲ್ಪ ಹಿಂದೆ,ನನ್ನ ಕೈ ಬೆರಳು ಬೋರ್ಡಿಗೆ ಮುಟ್ಟಿಸಿ ಪಾಠ ಮಾಡುತ್ತಿದ್ದರು.ಈ ತರಹದ ಮೇಡಂ ಗಳು ಇನ್ನು ಸಿಗುತ್ತಾರೋ ಇಲ್ವೋ?ಅಂತೂ ನನ್ನ ಭಯ ಎಲ್ಲ ಅಲ್ಲಿಗೆ ಮಾಯ,ದಿನಾ ಅವರ ಒಟ್ಟಿಗೆ ಶಾಲೆಗೆ ಹೋಗುವುದೂ ಬರುವುದೂ.ನಂಗೆ ನಾಯಿ ಕಂಡು ಹೆದರಿಕೆ ಆದರು ಅವರು ನನ್ನನ್ನು ಜಾಗ್ರತೆಯಾಗಿ ಕರೆದು ಕೊಂಡು ಹೋಗುತ್ತಿದ್ದರು.ನನ್ನ ಕೊಡೆ ಒಂದ್ಸಲ ಗಾಳಿಗೆ ತೂತಾದಾಗ ಅವ್ರೆ ನನ್ನನ್ನು ಎತ್ತಿಕೊಂಡು ಬಂದದ್ದು ಈಗಲೂ ಕಣ್ಣಿಗೆ ಕಾಣುತ್ತಿದೆ.ಎರಡನೇ ಕ್ಲಾಸ್ ಗೆ ಜಯಮ್ಮ ಮೇಡಂ,ಮೋರನೆ ಕ್ಲಾಸಸ್ ಗೆ ಸರೋಜಾ ಮೇಡಂ,೪ ನೆಗೆ ಉಗ್ಗಪ್ಪ ಸರ್, ೫ಗೆ ಭಾಸ್ಕರ ಮಾಸ್ತರು.೬ನೆಗೆ.ನಾಗೇಶ್ ಮಾಸ್ತರು. ೭ನೆಗೆ.ಜಗನ್ನಾಥ್ ರೈ.ಹೀಗೆ ಹೇಳಿದರೆ ತುಂಬಾ ಇದೆ.ಈ ಸಮಯದಲ್ಲಿ ನನ್ನ ಪರಿಚಯದವರು ಇದ್ದರೆ ಇಲ್ಲಿ ಈಗ ಸೇರೋಣ ಬನ್ನಿ,ಅದಕ್ಕಾಗಿ ಈ ಪುನರ್ಮಿಲನ.

1 comment:

  1. ಲಾಯ್ಕಾಯಿದು, ಒಳ್ಳೆ ನೆಂಪುಗೊ.
    ಶಾಲಗೋಪ ಸಮಯಲ್ಲಿ ಆ ’ಕೆಂಗುಡೇಲು’ ಬೋರ್ಡಿನ ನಾವಿಬ್ರು ಸೇರಿ ಪೊರ್ಪಿದ್ದು ನೆಂಪಿದ್ದೋ?
    ಇದ್ದರೆ ಅದನ್ನೂ ಬರೆ ಗಣೇಶಣ್ಣ, ಲಾಯ್ಕಿರ್ತು, ಹೆ ಹೆ... ;-)

    ReplyDelete