ನನ್ನ ಮೊದಲ ಮಾತು...

ನಾನು ಮಾಡಾವು ಗಣೇಶ.
ನನ್ನ ಮನದ ಮಾತುಗಳನ್ನು ಇಲ್ಲಿ ಬ್ಲಾಗಿಸುತ್ತಿದ್ದೇನೆ...
ನಿಮ್ಮ ಓದುವಿಕೆ ಹಾಗೂ ಸಹಕಾರವನ್ನು ನಿರೀಕ್ಷೆ ಮಾಡುತ್ತೇನೆ.

ಭಾವನೆಗಳು ಉಕ್ಕಿ, ನೆನಪುಗಳ ಬುತ್ತಿ ಬಿಚ್ಚಿ, ಕಲ್ಪನೆಯ ಕಂಪು ಪಸರಿಸಿದಾಗ... «»«»«»«»«»«»«»«»«» ಮನಸಿನಾಳದ ಮಾತು ಹೊರಹೊಮ್ಮಿಸಲು ಇದೊಂದು ಪೀಠಿಕೆ!... ಒಳ್ಳೆಯ ಲೇಖನಗಳ ಬರೆಯಲು ಬೇಕು ನಿಮ್ಮಯ ಹಾರೈಕೆ. «»«»«»«»«»«»«»«»«»«»«»«»«»«»«» ಸದಾ ನಿಮ್ಮವ,
~
ಗಣೇಶ್ ಭಟ್,ಮಾಡಾವು

Sunday, October 4, 2009

ಮಾನಸ ಸರೋವರ ಯಾತ್ರೆ -೧೨



















ಮಾನಸ ಸರೋವರದಲ್ಲಿ ಸ್ನಾನಮಾಡಿ, ಪ್ರದಕ್ಷಿಣೆ ಮಾಡುವುದರಿಂದ ಜನ್ಮ ಜನ್ಮಾಂತರದ ಪಾಪಗಳು ನಾಶವಾಗುತ್ತೆಂದು ಒ0ದು ನ0ಬಿಕೆ. ಕೇವಲ ಈ ಜನ್ಮದ ಪಾಪಗಳನ್ನು ತೊಳೆಯಬೇಕಾದರೆ ಒಂದು ಸಾರಿ ಪರಿಕ್ರಮ ಮಾಡಿದರೆ ಸಾಕು. ನಮಗೆ ಮಾತ್ರವಲ್ಲ, ಜೈನರಿಗೆ, ಬೌದ್ಧರಿಗೆ, ಟಿಬೆಟಿಯನರಿಗೆ ಪರಿಕ್ರಮದಲ್ಲಿ ತಮ್ಮದೇ ಆದ ನ0ಬಿಕೆಗಳಿವೆ. ವಿಶೇಷವಾದ ಅನುಭವ; ಹುಳು, ಹುಪ್ಪಟೆಗಳ ಕಾಟವಿಲ್ಲ. ಮಾನಸದ ಪರಿಕ್ರಮ ಮುಗಿಯುವ ದಿನ . 22 ಕಿಲೋಮೀಟರ್‌ ಹಾದಿಯನ್ನು ಪೂರ್ತಿ ಕಾಲ್ನಡಿಗೆಯಲ್ಲೇ ನಡೆದರಾಯಿತು . ಏರಿಳಿತಗಳೇನೇ ಇದ್ದರೂ ಈ ನಡಿಗೆ ನಮಗೆ ಉಲ್ಲಾಸ, ತೄಪ್ತಿಗಳನ್ನು ನೀಡಿತು. . .ಯಾತ್ರೆಯಲ್ಲಿ ಹಸಿವು ಕಡಿಮೆ. ಆದರೆ ಕುಡಿದ ನೀರಿನ ಲೆಕ್ಕ ಯಾರು ಇಟ್ಟಿದ್ದಾರೊ? ಎಷ್ಟು ಲೀಟರ್‌ ಆದವೊ?
ನನ್ನ ಪ್ರಥಮ ಅನುಭವ ...ಇದುವರೆಗೂ ಪ್ರಕೃತಿಯ ಮಡಿಲಲ್ಲಿ ನಿದ್ರಿಸಿರಲಿಲ್ಲ....ಮುಂಜಾನೆಯ ಮಂಜಿನೆಡೆಯಲ್ಲಿಯೇ ಸೂರ್ಯನ ಬೆಳಕು ನಮಗೆ ಬಂಗಾರ ವರ್ಣದ ನೀರ ಹನಿಗಳ ಸಿಂಚನವಾಯಿತು..ಬೆಳಗ್ಗಿನ ನಿತ್ಯವಿಧಿಗಳನ್ನು ಮುಗಿಸಿ ಹೊರಟೆವು..
ಮುಂಜಾನೆ ಮೈ ಆ ಬೆಟ್ಟಗಳನ್ನು ಅರ್ಧದಷ್ಟು ಮರೆಮಾಚಿರುವ ಮುಂಜಾನೆಯ ಮಂಜು. ಸುಮಾರು ೩ ಕಿಮೀ ನಡೆದೆವು.,ಧ್ರೊಗೋಗಾಂಪಾ ತಲುಪಿದೆವು.ಬೆಳಿಗ್ಗೆ ೧೧.೦೦ ಘಂಟೆ.. ೪೫ ನಿಮಿಷ ಹಾಗೇ ಮಾತನಾಡದೇ ಪ್ರಕೃತಿಯ ಪವಿತ್ರತೆಯನ್ನು ಆರಾಧಿಸುತ್ತ ಕುಳಿತ ನಮಗೆ ಪಾಂಡೆ 'ಕೂ' ಹಾಕಿ ಬೆಳಗ್ಗಿನ ಉಪಹಾರಕ್ಕಾಗಿ ಕೈ ಬೀಸಿ ಕರೆದಾಗಲೇ ಎಚ್ಚರವಾದದ್ದು. ಚಳಿ ಜೊತೆಗೆ ದಾರಿ ಕಾಣದಷ್ಟು ಗಾಢವಾದ ಮಂಜು ಕಣ್ಣಿಗೆ ಮನಸ್ಸಿಗೆ ಹಬ್ಬ ತಂದಿತ್ತು... ಇಲ್ಲಿಂದ ಸುಮಾರು ೧೧.೩೦ಕ್ಕೆ ಹೊರಟು ವಿಶಾಲವಾದ ಬಯಲಿನಲ್ಲಿ ನಡೆದು ಕೊನೆಗೆ ಒಂದು ಸಣ್ಣ ಗೊಂಪಾ ಸಿಕ್ಕಿತು. "ಗೊಸೋಲ್ ಗೊಂಪಾ"..ಒಂದು ಕುಸಿದು ಹೋದ ಕಟ್ಟಡ. ಇಲ್ಲಿಂದ ನಮ್ಮ ಪರಿಕ್ರಮ ಪೂರ್ತಿಯಾಗಲು ಇನ್ನು ೫ ಕಿಲೋ ಮೀಟರ್ ದೂರ ಇದೆ ..
ಮಾನಸದ ತಟಕ್ಕೆ ಬಂದೆ ,,ಇನ್ನು ಕೆಲವೇ ದೂರಗಳಲ್ಲಿ ನಮ್ಮ ಪರಿಕ್ರಮ ಪೂರ್ತಿಯಾಗುತ್ತದೆ...ಪ್ರದಕ್ಷಿಣೆ ಪೂರ್ತಿಯಾದ ನಂತರ ನನಗೆ ಮಾನಸದಲ್ಲಿ ಸ್ನಾನ ಮಾಡಬೇಕು ಎಂದನಿಸಿತು. ಪರಿಕ್ರಮ ಪೂರ್ತಿಯಾದ ತೃಪ್ತಿಯಲ್ಲಿ ಚಳಿ,ಆಯಾಸ ಒಂದೂ ನನಗೆ ಗೊತ್ತಾಗಲಿಲ್ಲ ..ಇಲ್ಲಿ ನನಗೆ ಹಂಸಗಳು ಕಾಣಲಿಲ್ಲವಾದರೂ ದೊಡ್ಡ ಗಾತ್ರದ ಬಾತುಗಳೂ ಕೊಕ್ಕರೆಗಳೂ ಕಾಣಿಸಿದವು.ಸಂಜೆ ಸುಮಾರು ೪ ಘಂಟೆಯ ಸಮಯ .........ನಾನು ಮಾನಸದ ನೀರಿನಲ್ಲಿ ಸುಮಾರು ೧೦ ರಿಂದ ೧೫ ಮೀಟರುಗಳಷ್ಟು ದೂರ ನಡೆದೆ. ಸುಮಾರು ದೂರ ಆಳವೇ ಗೊತ್ತಾಗಲಿಲ್ಲ. ನಂತರ ಒಂದು ಕಡೆ ಸ್ವಲ್ಪ ಎದೆಯ ಮಟ್ಟಕ್ಕೆ ನೀರಿರುವಲ್ಲಿ ನಿಂತಿಕೊಂಡು ಕೈಲಾಸ ಪರ್ವತಕ್ಕೆ ನಮಸ್ಕರಿಸಿ ಮುಳುಗಿದೆ.ಒಂದು ಸಲ ಮುಳುಗಿದೆ.ಛಳಿಯಿಂದ ದೇಹದ ಭಾರ ಮಾನಸದಲ್ಲಿ ಅರಿವಿಗೆ ಬರಲಿಲ್ಲ.ಮತ್ತೆರಡು ಸಲ ಮುಳುಗಿದೆ.ಮತ್ತೆ ಮುಳುಗಲು ಸಾಧ್ಯವಾಗಲಿಲ್ಲ.ಅಷ್ಟಕ್ಕೇ ನಾನು ಸೋತು ಹೋದೆ. ಸ್ನಾನದ ನಂತರ ಸಂಧ್ಯಾ ಸಮಯದ ಕಾರಣ ಮಾನಸದ ತಟದಲ್ಲಿಯೇ ಸಂಧ್ಯಾವಂದನೆ ಮಾಡೋಣ ಎಂದು ತೀರ್ಮಾನಿಸಿದೆವು.ಒಂದು ಕಡೆ ನಾವೆಲ್ಲಾ ಸಾಲಾಗಿ ಕುಳಿತೆವು.ಎಲ್ಲರ ಮನಸೂ ಬಹುಶ;ಏಕಾಗ್ರತೆ ಹೊಂದಿರಬೇಕು.ಯಾಕೆಂದರೆ ಸಂಧ್ಯೆಗೆ ಕುಳಿತ ೫ ನಿಮಿಷದಲ್ಲಿಯೇ ಯಾವ ಶಬ್ದವೂ ಕೇಳುತ್ತಿರಲಿಲ್ಲ .ಕೇವಲ ಮಾನಸದ ನೀರಿನ ಅಲೆಗಳು "ಓಂ" ಕಾರವನ್ನು ನಾದಿಸಿದವು. ನನ್ನ ಯೋಚನೆಗಳೇ ಹಾಗೆ ರೂಪು ತಲೆದಿರಬಹುದೆನ್ದುಕೊಂಡು ಧ್ಯಾನವನ್ನು ಹಾಗೆಯೇ ಮುಂದುವರಿಸಿದೆ.ಸ್ವಲ್ಪ ಹೊತ್ತಿಗೆ ನನ್ನಲ್ಲಿನ ಉಚ್ವಾಸ ನಿಶ್ವಾಸಗಳು ಮತ್ತು ಮಾನಸದ ಅಲೆಗಳ ನಾದವೂ ಒಂದಾಯಿತು.ಸ್ವಲ್ಪ ಸಮಯಕ್ಕೆ ನನಗೆ "ಓಂ"ಕಾರದ ಒಂದು ನಾದ ಬಲವಾಗಿ ಕೇಳಿಸಿತು..ಕಣ್ಣು ತೆರೆದು ನೋಡಿದಾಗ ಸೂರ್ಯ ಮಂಜಿನೆಡೆಯಲ್ಲಿ ಅಸ್ತಮಿಸುತ್ತಿದ್ದ. ಆ ಮಂಜು ಮತ್ತು ಸೂರ್ಯನ ಬೆಳಕು ಮಾನಸದ ತಟದಲ್ಲಿ ಗಾಳಿ ಬೀಸುವಾಗ "ಓಂ"ಕಾರದಂತೆ ಕಂಡಿತು.ಇದು ನನ್ನ ಸ್ವಪ್ನವೇ ಎಂದು ಒಂದು ಕ್ಷಣ ಆಲೋಚಿಸಿ ನನ್ನ ತೊಡೆಗೆ ನಾನೇ ಬಡಿದುಕೊಂಡೆ. ಇಲ್ಲ. ಎಚ್ಚರದಲ್ಲಿದ್ದೇನೆ...ಕೇವಲ ಸುಮಾರು ೧೫ ಸೆಕೆಂಡುಗಳ ಈ ಅನುಭವ ನನ್ನನ್ನೇ ದಂಗಾಗಿಸಿತು.ನನ್ನನ್ನು ನಾನೇ ಪರಿಶೀಲಿಸಿಕೊಂಡೆ.ಏನೋ ಒಂದು ಚೈತನ್ಯ!ಏನೋ ಒಂದು ಹೊಸತನ!ಆಗ ತಾನೇ ತಾಯಿ ಗರ್ಭದಿಂದ ಹೊರಬಿದ್ದ ಶಿಶುತ್ವ!ನನಗೇ ಅರ್ಥವಾಗದ ಆಲೋಚನೆಗಳು,ಭಾವನೆಗಳು,ನನ್ನಲ್ಲಿ ಕಣ್ಣೀರ ಧಾರೆಯಾಯಿತು.ನನ್ನನ್ನು ನಾನೇ ಮರೆತೆ.ಅಷ್ಟು ಅನೂಹ್ಯವಾಯ್ತು ಆ ಸಮಯ.ಇದಕ್ಕೆ ಆನಂದ ,ಸಂತೋಷ ಎಂದು ಹೇಳಬಹುದೇ? ಇದು ಕೇವಲ ಅನುಭವಿಸಬಹುದು ಅಷ್ಟೇ ಹೊರತು ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ... ಮನಸ್ಸು ಜಾಗೃತವಾಯಿತು..ನಮ್ಮ ಪರಿಕ್ರಮ ನಿಜಾವಾಗಿ ಆನಂದ,ತೃಪ್ತಿಯಾಯಿತು.ಬದುಕು ಸಾರ್ಥಕ ಎಂದನಿಸಿತು. ಈ ಅನುಭವ ವರ್ಣನೆ ಮಾಡಲು ನನಗೆ ಶಬ್ದಗಳೇ ಇಲ್ಲ... ನಮ್ಮೊಡನೆ ಇದ್ದ ಕೆಲವು ಮಂದಿ ನಮ್ಮನ್ನು ಬಿಟ್ಟು ಹೋಗಿದ್ದರು. ನಾವು ನಮ್ಮ ಊರಿನ ಕೆಲವೇ ಮಂದಿ ಅಲ್ಲಿದ್ದೆವು. ಇಂತಹ ದಿವ್ಯ ಅನುಭವವನ್ನು ಕರುಣಿಸಿದ ಮಾನಸದಲ್ಲಿರುವ ಸಮಸ್ತ ಅತೀಂದ್ರಿಯ ಶಕ್ತಿಗಳಿಗೂ ಕೈಲಾಸವಾಸಿಯಾದ ಪರಮೇಶ್ವರನಿಗೂ ನಮಸ್ಕರಿಸಿ ನಮ್ಮ ರೂಮಿಗೆ (ದಾರ್ಚಿನ್) ಹೆಜ್ಜೆ ಹಾಕಿದೆವು.

No comments:

Post a Comment